Menu

ಎಸ್ತೇರಳು 10

OKCV

1 ಅರಸನಾದ ಅಹಷ್ವೇರೋಷನು ದೇಶದ ಮೇಲೆಯೂ ಸಮುದ್ರದ ದ್ವೀಪಗಳ ಮೇಲೆಯೂ ತೆರಿಗೆಯನ್ನು ನೇಮಿಸಿದನು. 2 ಅವನ ಅಧಿಕಾರದ ಕ್ರಿಯೆಗಳೂ ಅವನ ಪರಾಕ್ರಮವೂ ಅರಸನು ಮೊರ್ದೆಕೈಯನ್ನು ಹೆಚ್ಚಿಸಿದ ಮಹತ್ತಿನ ಪ್ರಸಿದ್ಧಿಯೂ ಮೇದ್ಯ ಮತ್ತು ಪಾರಸಿಯ ಅರಸರ ಇತಿಹಾಸಗಳ ಗ್ರಂಥದಲ್ಲಿ ಬರೆದಿರುತ್ತವೆ. 3 ಯೆಹೂದ್ಯನಾದ ಮೊರ್ದೆಕೈ ಅರಸನಾದ ಅಹಷ್ವೇರೋಷನಿಗೆ ಎರಡನೆಯವನೂ ಯೆಹೂದ್ಯರಲ್ಲಿ ಸನ್ಮಾನಿತನೂ ತನ್ನ ಸಹೋದರರ ಸಮೂಹದಲ್ಲಿ ಹೆಚ್ಚಿನ ಗೌರವ ಪಾತ್ರನೂ ತನ್ನ ಜನರ ಹಿತಚಿಂತಕನೂ ತನ್ನ ಸಂತಾನದವರಿಗೆ ಕ್ಷೇಮಾಭಿವೃದ್ಧಿಯನ್ನು ಮಾತನಾಡುವವನೂ ಆಗಿದ್ದನು.

Everything we make is available for free because of a generous community of supporters.

Donate